MUSTHAFA HASAN ALQADRI OFFICIAL : 2023

Translate

Friday, December 29, 2023

ಮತ್ತೊಮ್ಮೆ ಮುಸಲ್ಮಾನರನ್ನು ಕೆಣಕಿಸುವ ಹುನ್ನಾರವೇ




ಇತ್ತೀಚಿಗೆ ನಡೆದ ಸಾಮೂಹಿಕ ಸಭೆಯಲ್ಲಿ ಮುಸಲ್ಮಾನ ಮಹಿಳೆಯರ ವಿರುದ್ಧ ಅಸಬ್ಯ ಮಾತುಗಳನ್ನು ಆಡಿ ಮತ್ತೊಮ್ಮೆ ಈ ದೇಶದ ಪ್ರಜ್ಞಾವಂತರ ಮನಸ್ಸಿಗೆ ತನ್ನ ಹರಿತವಾದ ನಾಲಿಗೆಯಿಂದ ವಿಶ ಕಾರಿದ ಕಲ್ಲಡ್ಕ ಪ್ರಬಾಕರ ಭಟ್ಟರು ಒಂದು ಪಂಗಡಕ್ಕೆ ಮಾತ್ರವಲ್ಲ ಇಡೀ ಮಾನವ ಸಮೂಹದ ತಲೆ ತಗ್ಗಿಸಿ ನಡೆಯಬೇಕಾದ ಪರಿಸ್ಥಿತಿ ಯನ್ನು ಶ್ರಸ್ಟಿಸಿದರು ಇಲ್ಲಿ ತಾನು ಇನ್ನೋಂದು ಸಮೂಹವನ್ನು ದೂರಿ ಎಷ್ಟು ಸಮಯ ತಾನು ಸುಖವಾಗಿರಲು ಸಾಧ್ಯ ಇಲ್ಲಿ ಒಬ್ಬ ಮಹಿಳೆಯನ್ನು ಅಸಬ್ಯ ಮಾತಿನಿಂದ ಗಾಯ ಗೊಳಿಸಿದ್ದು ಮಾತ್ರವಲ್ಲ ಆ ಮಹಿಳೆಯರಲ್ಲಿ ಒಬ್ಬ ತಾಯಿ ತಂಗಿ ಅಕ್ಕ ಮಡದಿ ಇಂತಹ ಅನೇಕ ಸಂಬದಗಳು ಅಡಗಿವೆ ತಾನೂ ಕೂಡ ಒಂದು ಮಹಿಳೆಯ ಮುಕಾಂತರವೇ ಈ ಲೋಖ ಪ್ರವೇಶಿಸಿದ್ದು ಎಂಬ ಜ್ನಾನ ಕೂಡ ಇರಬಾರದೇ ಇಲ್ಲಿ ಏನೇ ಮಾಡಿದರೂ ಸಹಿಸಿ ಕೊಳ್ಳುವ ಶಕ್ತಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಇರಬೇಕೆಂದೇನಿಲ್ಲ

ಸ್ವಾತಂತ್ರ ಭಾರತದಲ್ಲಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ ಆದರೆ ನಮ್ಮ ಪದಗಳು ಇನ್ನೊಬ್ಬರ ಮನಸ್ಸಿಗೆ ಗಾಯವಾಗದಿರಲಿ ಇದೊಂದು ಟ್ರೇಲರ್ ಅಷ್ಟೇ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿವೆ ಬಹು ಸಂಖ್ಯಾತರ ಓಟು ಪಡೆಯಲು ಮಾಡುವ ಹುನ್ನಾರವೆ ಒಂದು ಸಮುದಾಯದ ಮಹಿಳೆಯನ್ನು ನಿಂದಿಸಿ ತನ್ನ ರಾಜಕೀಯ ಬೇಳೆಯಬೇಯಿಸಲು ಇದೂ ಒಂದು ಪ್ರಯೋಗ ಎಂದೇ ಹೇಳಬಹುದು ಇಲ್ಲಿ ಅಲ್ಪ ಸಂಖ್ಯಾತರಿಗೆ ಏನೇ ಹೇಳಿದರೂ ಜಾಮೀನು ರಹಿತ ಹೊರಬರಬಹುದು ಎಂಬ ದ್ರಡ ನಂಬಿಕೆ ಇಂತಹವರ ಮೂಲ ಶಕ್ತಿ ಇದಕ್ಕೆ ಸರ್ಕಾರ ತಕ್ಕದಾದ ಶಿಕ್ಷೆ ನೀಡಬೇಕು ಇಂತಹ ಅನಾಹುತಗಳು ಮತ್ತೆ ನಡೆಯದೇ ಇರಲಿಕ್ಕೆ ಜಾಗ್ರತಾ ಕ್ರಮ ನಡೆಯಬೇಕು

ABUYAMIN ALQADRI OFFICIAL

Thursday, December 28, 2023

ಶತಕದ ಸಂಭ್ರಮದಲ್ಲಿ ಸಮಸ್ತ*



ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ನೇರವಾಗಿ ಶಿಷ್ಯತ್ವವನ್ನು ಪಡೆದು ಇಸ್ಲಾಮಿನ 

ಸಂದೇಶವನ್ನು ಸಾರಲು ಭಾರತಕ್ಕೆ ಬಂದ ಮಾಲಿಕುದ್ದೀನಾರ್(ರ) ಮತ್ತು ಸಂಗಡಿಗರಿಂದಾಗಿದೆ 

ಇಲ್ಲಿ ಇಸ್ಲಾಮಿನ ಪ್ರಚಾರ ಪ್ರಾರಂಭವಾಗುವುದು. ಈ ರೀತಿ ಪ್ರಾರಂಭವಾದ ಇಸ್ಲಾಮಿನ ವಿಶ್ವಾಸ, ಆಚಾರ ವಿಚಾರಗಳಲ್ಲಿ ಆಕರ್ಷಿತರಾದ ಇವತ್ತಿನ ಮುಸ್ಲಿಮರ ಪೂರ್ವಜರಾದ ಅಂದಿನ ವಿವಿಧ ಜಾತಿಯ ಬಾರತೀಯರು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡು ಇಸ್ಲಾಮಿನ ನೈಜ ಆದರ್ಶ ಆಶಯ ಆಚಾರ ವಿಚಾರಗಳನ್ನು ಮೈಗೂಡಿಸಿ ಕೊಂಡು ಸುದೀರ್ಘ ಶತಮಾನಗಳಲ್ಲಿ ಶಾಂತಿ ಸಹಬಾಳ್ವೆಯಿಂದ ಯಾವುದೇ 

ಭಿನ್ನಾಭಿಪ್ರಾಯಗಳಿಲ್ಲದೆ ಒಗ್ಗಟ್ಟಿನಿಂದ ಜೀವಿಸಿ ಬರುತ್ತಿದ್ದರು.


ಆದರೆ ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಭಾರತೀಯ ಮುಸಲ್ಮಾನರ ಸುದೀರ್ಘ ಹಾಗೂ ಸುಂದರವಾದ ಒಗ್ಗಟ್ಟು ಹಾಗೂ ಐಕ್ಯವನ್ನು ಮುರಿದು ಸಹಾಬಿಗಳಿಂದ ನೇರವಾಗಿ ಕಲಿತು ಸುದೀರ್ಘ ಶತಮಾನಗಳಲ್ಲಿ ಮೈಗೂಡಿಸಿ ಕೊಂಡು ಬಂದಿದ್ದ ಅನೇಕ ನಂಬಿಕೆ ಆಚಾರ ವಿಚಾರಗಳನ್ನು ಪ್ರಶ್ನಿಸಿ ಒಗ್ಗಟ್ಟಾಗಿದ್ದ ಸುಂದರ ಸಮುದಾಯದಲ್ಲಿ ಬಿನ್ನತೆಯ ವಿಷಬೀಜವನ್ನು 

ಬಿತ್ತಿ ಸಮುದಾಯವನ್ನು ಚಿಂದಿ ಚೂರು ಮಾಡುವ ಉದ್ದೇಶದಿಂದ ನವೀನ ವಾದಗಳೊಂದಿಗೆ ಪ್ರತ್ಯಕ್ಷಗೊಂಡ 

ನವೀನವಾದಿಗಳು ಇಸ್ಲಾಮಿನ ಸುಂದರ ಆಶಯವನ್ನು ವಿಕೃತ ಗೊಳಿಸಲು ಹೊರಟು ತಮ್ಮ ಕಾರ್ಯಾಚರಣೆ ಪ್ರಾರಂಭಿಸಿದ್ದರು.


ಇದನ್ನರಿತ ಅಂದಿನ ದೀರ್ಘ ದೃಷ್ಟಿಯಿರುವ ಸಾದಾತುಗಳು ವಿದ್ವಾಂಸರು ತಮ್ಮ 

ಜವಾಬ್ದಾರಿಯರಿತು ಇದನ್ನು ತಡೆಗಟ್ಟಲು ಹಾಗೂ ಇಸ್ಲಾಮಿನ ಪರಂಪರಾಗತ ಸುಂದರ ಆಶಯ ಹಾಗೂ ಸಮುದಾಯ ಕಾಪಾಡಿ ಕೊಂಡು ಬಂದಿದ್ದ ಒಗ್ಗಟ್ಟನ್ನು ಕಾಪಾಡುವ ಉದ್ದೇಶದಿಂದ ಸೆಟೆದೆದ್ದು ಸಮುದಾಯದಲ್ಲಿ ಇದರ ವಿರುದ್ಧ ಜಾಗೃತಿ ಆಂದೋಲನವನ್ನು ಕೈಗೊಂಡಿದ್ದರು.


ಇದರ ಫಲವಾಗಿದೆ 1926 ರಲ್ಲಿ ಬಹುಮಾನ್ಯರಾದ 

ವರಕ್ಕಲ್ ತಂಙಳ್ ರವರ ನೇತೃತ್ವದಲ್ಲಿ ಸ್ಥಾಪಿತವಾದ ಸಮಸ್ತ ಕೇರಳ ಜಂಇಯತುಲ್ ಉಲಮಾ ಎಂಬ ಸರಿಸಾಟಿಯಿಲ್ಲದ ಮಹತ್ತರವಾದ ವಿದ್ವಾಂಸ 

ಸಂಘಟನೆ. ಈ ಸಂಘಟನೆಯಾಗಿದೆ ಸುದೀರ್ಘ 

ಅವಧಿಯಲ್ಲಿ ಇಸ್ಲಾಮಿನ ನೈಜ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿರುವುದು ಎಂಬುದು ತರ್ಕವಿಲ್ಲದ ವಿಷಯವಾಗಿದೆ.

ಒಂದು ವೇಳೆ ಈ ಸಮಸ್ತ ಇಲ್ಲದೆ ಇರುತ್ತಿದ್ದರೆ ಇತರ ನಾಡುಗಳಲ್ಲಿ ಸಂಭವಿಸಿದಂತೆ ಇಸ್ಲಾಮಿನ ನೈಜ ಸಂಸ್ಕೃತಿಗಳು ಮಾಯವಾಗಿ ನವೀನ ಆಶಯಗಳು ಮತ್ತು ಇಸ್ಲಾಂ ವಿರೋಧಿ ಸಂಸ್ಕೃತಿಯು ಮೇಲೈಸುತ್ತಿತ್ತು ಎಂಬುದರಲ್ಲಿ ಅನುಮಾನಕ್ಕೆ ಅವಕಾಶವಿಲ್ಲ.

  *ಸಾತ್ವಿಕರಾದ ವಿದ್ವಾಂಸರಿಂದ ಸ್ಥಾಪಿತವಾದ ಈ ಸಮಸ್ತ ಸಂಘಟನೆ ಇವತ್ತು ಕೇರಳವನ್ನು ಮೀರಿ ಭಾರತ ದೇಶವನ್ನು ದಾಟಿ ವಿಶ್ವ ವ್ಯಾಪಕವಾಗಿ ಕಾರ್ಯಾಚರಿಸುವ ಮಾದರೀ ಸಂಘಟನೆಯಾಗಿದೆ.*

ಅಲ್ಲದೆ ವಿದ್ಯಾಬ್ಯಾಸ ರಂಗದಲ್ಲಿ ಸಮುದಾಯದಲ್ಲಿ ನವ ಜಾಗೃತಿ ಸೃಷ್ಟಿಸಿ ವಿಸ್ಮಯಕರವಾದ ಕ್ರಾಂತಿಯನ್ನು ಮಾಡಿದ ಕೀರ್ತಿಗೆ ಪಾತ್ರವಾಗಿ ಇಡೀ ಜಗತ್ತಿನಲ್ಲಿಯೇ ಸರಿಸಾಟಿಯಿಲ್ಲದ ಸಂಘಟನೆಯೆನಿಸಿದೆ!. ವಿದ್ಯಾರ್ಥಿ ಯುವಜನ ಮತ್ತು ಬಹುಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಸ್ಲಿಂ ಜಮಾಅತ್,ಎಸ್ವೈಎಸ್ ಎಸ್ಸೆಸ್ಸೆಫ್,ಎಸ್ಬಿಎಸ್ 

ಮುಂತಾದ ವಿವಿಧ ಯುವ ವಿದ್ಯಾರ್ಥಿ ಬಹುಜನ ಸಂಘಟನೆಗಳನ್ನು ಸ್ಥಾಪಿಸಿ *ಯುವ ಸಮೂಹವು ಉಗ್ರವಾದ, ಭಯೋತ್ಪಾದನೆ ಮತ್ತು ನವೀನವಾದಗಳ ಕಡೆಗೆ ವಾಲದಂತೆ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.* ಅಮೇರಿಕ, ಬ್ರಿಟನ್, ಕೆನಡಾ ಮುಂತಾದ ದೇಶಗಳನ್ನೊಳಗೊಂಡು ಜಿಸಿಸಿ ರಾಷ್ಟ್ರಗಳಲ್ಲಿಯೂ ತನ್ನ ಸಂಘಟನಾ ಚಾಪನ್ನು ಮೂಡಿಸಲು ಸಾದ್ಯವಾಗಿದೆ. 

ಅಲ್ಲದೆ ದೇಶ ವಿದೇಶಗಳಲ್ಲಿ ಸಾವಿರಾರು ಮಸ್ಜಿದ್ ಮದ್ರಸಗಳು,ಶಾಲೆಗಳು ಕಾಲೇಜುಗಳು,ಯುನಿವರ್ಸಿಟಿಗಳು, ಸಾಮಾಜಿಕ ಕೇಂದ್ರಗಳನ್ನು ಸ್ಥಾಪಿಸಿ ನಾಯಕತ್ವವನ್ನು ನೀಡುತ್ತಿದೆ. ಮಾತ್ರವಲ್ಲ ಈ ಎಲ್ಲಾ ವಿದ್ಯಾ ಕೇಂದ್ರಗಳಲ್ಲಿ ಅತ್ಯಂತ ವೈಜ್ಞಾನಿಕ ಏಕೀಕೃತ ಪಠ್ಯ ಪದ್ಧತಿಯನ್ನು ಜಾರಿಗೊಳಿಸಿ ಏಕೀಕೃತ ಪರೀಕ್ಷಾ ಪದ್ಧತಿಯನ್ನೂ ಕೈಗೊಂಡಿದೆ. *ವಿವಿಧ ವಿಷಯಗಳಲ್ಲಿ ವಿವಿಧ ಭಾಷೆಗಳಲ್ಲಿ ಪರಿಣತಿ ಹೊಂದಿರುವ ಲಕ್ಷಾಂತರ ವಿದ್ವಾಂಸರನ್ನು ಸೃಷ್ಟಿಸಿ ಆದುನಿಕ ಯುಗದಲ್ಲಿ ಬೋಧನಾ ತರಬೇತಿ ನೀಡಿ ಸಮುದಾಯಕ್ಕೆ ಅರ್ಪಿಸಿದೆ. ಇಸ್ಲಾಮಿನ ವಿರುದ್ಧ ಬರುವ ಸರ್ವಸವಾಲುಗಳನ್ನು ಎದುರಿಸಿ ಸಂವಾದ,ಭಾಷಣ,ಬರಹ ಮುಂತಾದ ಎಲ್ಲಾ ವಲಯಗಳಲ್ಲಿ ಮಿಂಚುವ ಪ್ರಬುದ್ಧ ಪ್ರತಿಭೆಗಳನ್ನು ಸೃಷ್ಟಿಸಲು ಈ ಸಂಘಟನೆಗೆ ಸಾಧ್ಯವಾಗಿದೆ.* ಇದೀಗ ಈ ಸಂಘಟನೆ ನೂರು ವರ್ಷಗಳನ್ನು ಪೋರೈಸಿ ಶತಮಾನೋತ್ಸವ ಆಚರಿಸುವ ಸಂಭ್ರಮದಲ್ಲಿದೆ. *ಸಂಭ್ರಮದ ಘೋಷಣಾ ಸಮಾವೇಶವು ಇದೇ ಡಿಸೆಂಬರ್ 30 ರಂದು ಕಾಸರಗೋಡಿನ ಮಾಲಿಕುದ್ದೀನಾರ್ ನಗರದಲ್ಲಿ ನಡೆಯಲಿದೆ.* 2026 ರ ತನಕ ವಿವಿಧ ಪದ್ಧತಿ ಗಳೊಂದಿಗೆ ನಡೆಯಲಿದೆ. ಅನೇಕ ಔಲಿಯಾ ಸಮಾನರಾದ ಉಲಮಾಗಳು ಈ ಸಂಘಟನೆಯಲ್ಲಿ ಈ ಸುದೀರ್ಘ ಅವಧಿಯಲ್ಲಿ ಸ್ಥಾಪಿತ ಉದ್ದೇಶದಿಂದ ಚಾಚೂ ತಪ್ಪದೆ ಆಶಯ ಆದರ್ಶದಲ್ಲಿ ಯಾವುದೇ ರಾಜಿಗೆ ಸಿದ್ದರಾಗದೆ ತ್ಯಾಗೋಜ್ವಲವಾದ ಸೇವೆಯನ್ನು ಸಲ್ಲಿಸಿರುತ್ತಾರೆ. ವರಕ್ಕಲ್ ತಂಙಳ್,ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್, ವಾಳಕ್ಕುಳಂ ಅಬ್ದುಲ್ ಬಾರಿ ಮುಸ್ಲಿಯಾರ್,ಪದಿ ಅಬ್ದುಲ್ ಖಾದಿರ್ ಮುಸ್ಲಿಯಾರ್, ಸದಖತುಲ್ಲಾ ಮುಸ್ಲಿಯಾರ್, ಶಂಸುಲ್ ಉಲಮಾ ಖುತುಬಿ ಮುಹಮ್ಮದ್ ಮುಸ್ಲಿಯಾರ್, ರಈಸುಲ್ ಮುಹಖ್ಖಿಖೀನ್ 

ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್

ಅಹ್ಮದ್ ಕೋಯ ಶಾಲಿಯಾತಿ, ಶಂಸುಲ್ ಉಲಮಾ 

ಇ.ಕೆ ಅಬೂಬಕ್ಕರ್ ಮುಸ್ಲಿಯಾರ್, ಇ.ಕೆ ಹಸನ್ ಮುಸ್ಲಿಯಾರ್,ಕೆ.ಕೆ ಹಝ್ರತ್, ಕೊಟುಮಲ ಉಸ್ತಾದ್, ಕೂಟನಾಡ್ ಉಸ್ತಾದ್,

ತಾಜುಲ್ ಉಲಮಾ ಅಸ್ಸೆಯ್ಯಿದ್ ಅಬ್ದುರ್ರಹ್ಮಾನ್ ಅಲ್  ಬುಖಾರಿ, ನೂರುಲ್ ಉಲಮಾ ಎಂ.ಎ ಉಸ್ತಾದ್, ಕಂಝುಲ್ ಉಲಮಾ ಚಿತ್ತಾರಿ ಉಸ್ತಾದ್,ಎ.ಪಿ ಮುಹಮ್ಮದ್ ಮುಸ್ಲಿಯಾರ್, ಅಂಡೋಣ ಉಸ್ತಾದ್ (ನವ್ವರಲ್ಲಾಹು ಮರಾಖಿದಹುಮ್) ಮುಂತಾದವರು ಪ್ರಮುಖರಾಗಿದ್ದಾರೆ.


ಅನೇಕ ಸಂದರ್ಭಗಳಲ್ಲಿ ಅಧಿಕಾರ ರಾಜಕೀಯ ಹಿತಾಸಕ್ತಿಗಳಿಗೆ ಬೇಕಾಗಿ ಈ ಸಂಘಟನೆಯನ್ನು 

ಹೈಜಾಕ್ ಮಾಡುವ ಪ್ರಯತ್ನಗಳು ನಡೆದರೂ ಧೀರ ಶೂರ ವಿದ್ವಾಂಸ ಕೇಸರಿಗಳ ಹೋರಾಟದ ಮುಂದೆ ಅದ್ಯಾವುದೂ ನಡೆಯದೆ ತನ್ನ ಸ್ಥಾಪಿತ ಉದ್ದೇಶದಲ್ಲಿ ಸುಭದ್ರವಾಗಿ ಶತಕವನ್ನು ಆಚರಿಸುವ ಈ ಸಂದರ್ಭದಲ್ಲಿಯೂ ಮುಂದುವರಿಯುತ್ತಿದೆ. ಅಲ್ಲದೆ ಧಾರ್ಮಿಕ ಸಾಮಾಜಿಕ ವಿಷಯಗಳಲ್ಲಿ ಮುಸ್ಲಿಂ ಸಮುದಾಯದ ಅಂತಿಮ 

ಫರ್ಮಾನಾಗಿಯೂ ನೆಲೆಗೊಂಡಿದೆ.


ನಿಸ್ವಾರ್ಥ ಹಾಗೂ ಸಾತ್ವಿಕ ಉಲಮಾಗಳ ದಂಡೇ ಈ ಪವಿತ್ರ ಸಮಸ್ತದಲ್ಲಿ ತಮ್ಮ ಅವಿರತವಾದ ಸೇವೆಗಳನ್ನು ಸಲ್ಲಿಸಿರುತ್ತಾರೆ. ಅವರಲ್ಲಿ ಅನೇಕರು ಇಂದು ನಮ್ಮೊಂದಿಗಿಲ್ಲ. ಅಲ್ಲಾಹು ಅವರ ಪದವಿಗಳನ್ನು ಉನ್ನತಿಗೇರಿಸಿ ಅವರೊಂದಿಗೆ ಪರಲೋಕದಲ್ಲಿ ಸ್ವರ್ಗ ಪ್ರವೇಶಿಸುವ ಸೌಭಾಗ್ಯವನ್ನು ನಮಗೆ ನೀಡಲಿ.ಆಮೀನ್.


   ಅವರಲ್ಲಿ ಅನೇಕರು ಅನೇಕ ವರ್ಷಗಳಿಂದ ಸೇವೆಗೈಯುತ್ತಾ ಈಗಲೂ ಸಮಸ್ತದಲ್ಲಿದ್ದಾರೆ. ಸುಮಾರು 50 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಮಸ್ತದಲ್ಲಿದ್ದು ಈಗಲೂ ಸಮಸ್ತವನ್ನು ಮುನ್ನಡೆಸಿ ಕೊಂಡು ಹೋಗುವವರಾಗಿದ್ದಾರೆ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು,..

ಅಲ್ಲಾಹನು ಅವರಿಗೆಲ್ಲಾ ದೀರ್ಘಾಯುಷ್ಯ, ಆಫಿಯತನ್ನು ಕರುಣಿಸಲಿ,ಆಮೀನ್.

       ಇದೀಗ ಈ ಸಮಸ್ತೆಯು ಬಹುಮಾನ್ಯರಾದ ರಈಸುಲ್ ಉಲಮಾ ಸುಲೈಮಾನ್ ಉಸ್ತಾದ್ ಅಧ್ಯಕ್ಷರಾಗಿಯೂ ಸರಿಸಾಟಿಯಿಲ್ಲದ ಜಾಗತಿಕ 

ವಿದ್ವಾಂಸ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು ಪ್ರಧಾನ ಕಾರ್ಯದರ್ಶಿಯಾಗಿಯೂ 

ತಾಜುಲ್ ಮುಹಖ್ಖಿಖೀನ್ ಕೋಟೂರು ಉಸ್ತಾದರು ಕೋಶಾಧಿಕಾರಿಯಾಗಿಯೂ ನಾಯಕತ್ವ ನೀಡುತ್ತಿದ್ದಾರೆ. ಅಲ್ಲಾಹು ಅವರಿಗೆ ಇನ್ನಷ್ಟು ದೀರ್ಘ ಕಾಲ ನಾಯಕತ್ವ ನೀಡಲು ಆ ನಾಯಕತ್ವದಡಿಯಲ್ಲಿ ಜೀವಿಸಲೂ ನಮಗೆ ತೌಫೀಖ್ ನೀಡಿ ಅನುಗ್ರಹಿಸಲಿ ಆಮೀನ್.

P.P.AHMAD SAQAFI KASHIPATNA

Saturday, April 29, 2023

THE KERALA STORY ಎಂಬ ಹೆಸರಿನಲ್ಲಿ ಮುಸಲ್ಮಾನ ರ ಸಾಮೂಹಿಕ ಹತ್ಯೆಯ ಎಜಂಡವನ್ನು ಭಾರತದ ಮಣ್ಣಿನಲ್ಲಿ ಕಂಗೊಳಿಸಲಿದೆ

 

THE KERALA STORY
ಎಂಬ ಹೆಸರಿನಲ್ಲಿ ಮುಸಲ್ಮಾನ ರ ಸಾಮೂಹಿಕ ಹತ್ಯೆಯ ಎಜಂಡವನ್ನು ಭಾರತದ ಮಣ್ಣಿನಲ್ಲಿ ಕಂಗೊಳಿಸಲಿದೆ



ಭಾರತದ ನೆಲ ಜಲ ವನ್ನು ನಂಬಿ ಬದುಕುವ ಇಲ್ಲಿನ ಮುಸಲ್ಮಾನರ ವಿರುದ್ಧ  ಮತ್ತೊಮ್ಮೆ ಈ ಫಿಲಂ ಅನ್ನು  ಉಡುಗೊರೆ ಯಾಗಿ ನೀಡಲಿದ್ದಾರೆ ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಮುಸಲ್ಮಾನರ ವಿರುದ್ಧ ಹೇಗೆ ಅಸ್ತ್ರಗಳನ್ನು ಪ್ರಯೋಗಿಸಬೇಕು  ಅದೆಲ್ಲ ಪ್ರಯೋಗಿಸುವರು THE KASHMIR FILE ತೋರಿಸಿ  ಇಲ್ಲಿನ ವಾತಾವರಣ ಹಾಳು ಮಾಡಿದಲ್ಲದೇ ಬೇರೇನು ಪ್ರಯೋಜನ ಆಗಲಿಲ್ಲ ಭಾರತದ ಶೇಖಡ 80%ರಷ್ಟು ಅಮುಸ್ಲಿಮರೇ  ಅದನ್ನು ಎದುರಿಸಿದ್ದರು ಆ ಫಿಲಂ ನಿಂದ ಗಳಿಸಿದ ಸಾವಿರಾರು ಕೋಟಿ ಕಾಶ್ಮೀರಿ ಪಂಡಿತರಿಗೆ ಅವರ ನೆಲವನ್ನು ಅವರಿಗೆ ನೀಡಿ ಅವರಿಗೆ ಮನೆ ಕಟ್ಟಿ ಕೊಟ್ಟಿದ್ದರೆ   ಸಾರ್ಥಕ ವಾಗುತ್ತಿತ್ತು ಹಿಂದು ಮುಸಲ್ಮಾನ ರ ಮದ್ಯೆ ದ್ವೇಷದ ವಾತಾವರಣ ಶ್ರಷ್ಟಿ ಮಾಡುವುದು ಇವರ ರೂಡಿಯಾಗಿದೆ
ಬಡ ಮುಸಲ್ಮಾನ ಇವರ ಅಜೆಂಡ ಗಳಿಗೆ ಬಲಿಯಾಗುವ ಕಾಲ ದೂರವಿಲ್ಲ ನಿಜವಾಗಿಯೂ ಫಿಲಂ ನಲ್ಲಿ ತೋರಿಸುವ ಸನ್ನಿವೇಶ ಗಳು ಸತ್ಯವೇ ಸುಳ್ಳು ಕತೆಗಳನ್ನು ಶ್ರಷ್ಟಿ ಸಿ ಅಧಿಕಾರದ ಆಸೆಗಾಗಿ ಇನ್ನೆಷ್ಟು ಬಡಪಾಯಿ ತನ್ನ ಜೀವವನ್ನು ಬಲಿಯಾಗಿಸ ಬೇಕು ಭಾರತದ ಪ್ರತಿಯೊಬ್ಬ ಪ್ರಜೆಯೂ ಚಿಂತಿಸಬೇಕಾದ ವಿಷಯ  ಮೂವಿ ಏನನ್ನು ಶ್ರಷ್ಟಿ ಸಲಿದೆ ಕಾದು ನೋಡೋಣ

S. M. MUSTHAFA SASTHANA

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...