MUSTHAFA HASAN ALQADRI OFFICIAL : January 2024

Translate

Friday, January 19, 2024

ರಂಜಾನ್ ಪಾವನ ಮಾಸ



ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ಏಕೆಂದರೆ ಉಪವಾಸದ ಪೂರ್ಣ ಪ್ರಯೋಜನವು ಈ ತಿಂಗಳಲ್ಲಿ ಸೇವಿಸುವ ಆಹಾರದ ಪ್ರಮಾಣವನ್ನು ಅವಲಂಬಿಸಿರುತ್ತದೆ, ಆದ್ದರಿಂದ ಸಾಮಾನ್ಯ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ ಆಹಾರವನ್ನು ಒಳಗೊಂಡಿರುವ ಆಹಾರವನ್ನು ಅನುಸರಿಸಬೇಕು ಇದು ಸಮತೋಲಿತವಾಗಿರುವವರೆಗೆ ಮತ್ತು ಬೆಳಗ್ಗಿನ ಜಾವ ಸುಹೂರ್ ಮತ್ತು ಉಪಾಹಾರದ ಅನ್ಯ ಊಟಗಳ ಮೇಲೆ ವಿತರಿಸಲಾಗುವ ಎಲ್ಲಾ ಪ್ರಮುಖ ಆಹಾರ ಗುಂಪುಗಳನ್ನು ಒದಗಿಸುವವರೆಗೆ ಮತ್ತು ರಂಜಾನ್ ಪಾನೀಯಗಳಂತಹ ಸಾಕಷ್ಟು ಪ್ರಮಾಣದ ದ್ರವಗಳನ್ನು ಪಡೆಯುವುದರಿಂದ ಅದು ನಮ್ಮ ದೇಹದಲ್ಲಿನ ನೀರು ಮತ್ತು ಉಪ್ಪಿನ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ವಿಶೇಷವಾಗಿ ನಮಗೆ ರಂಜಾನ್ ಪಾನೀಯಗಳಿಂದ ಪ್ರಯೋಜನ.ಏನು ರಂಜಾನ್ ಪಾನೀಯಗಳ ಪ್ರಯೋಜನಗಳು. ಕೆಫೀನ್ ಹೊಂದಿರುವ ರಂಜಾನ್ ಪಾನೀಯಗಳನ್ನು ತ್ಯಜಿಸಿ ಮತ್ತು ಅವುಗಳಲ್ಲಿ ವಿಟಮಿನ್ ಹೊಂದಿರುವ ನೀರು ಮತ್ತು ದ್ರವಗಳೊಂದಿಗೆ ಬದಲಾಯಿಸುವುದು ಉತ್ತಮ. ತಂಪು ಪಾನೀಯಗಳು, ಚಹಾ ಮತ್ತು ಕಾಫಿ ಹಾಗೂ ಇತರವು ಪದಾರ್ಥಗಳು ಮೂತ್ರವರ್ಧಕವೆಂದು ಪರಿಗಣಿಸಲಾಗುತ್ತದೆ ಮತ್ತು ಅದು ಅತೀ ವೇಗವಾಗಿ ನೀರಿನ ನಷ್ಟವನ್ನು ನಮ್ಮ ದೇಹದಲ್ಲಿ ಉತ್ತೇಜಿಸುತ್ತದೆ, ಇದು ನಿರ್ಜಲೀಕರಣದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಭಾರತೀಯ ಚರಿತ್ರೆಯಲ್ಲಿ ಹುಣಿಸೇಹಣ್ಣಿನ ಹಣ್ಣುಗಳು ಭಾರತೀಯ ಉಪಖಂಡದ ಉಷ್ಣವಲಯದ ಹಣ್ಣಿನ ಮರಗಳಲ್ಲಿ ಒಂದಕ್ಕೆ ಸೇರಿವೆ, ಇದರ ಮೂಲ.. ಮುಖ್ಯವಾಗಿ ಆಫ್ರಿಕಾ ಮತ್ತು ನಿರ್ದಿಷ್ಟವಾಗಿ ಮಡಗಾಸ್ಕರ್ ಆಗಿದೆ, ಆದರೆ ಇದು ಇತ್ತೀಚೆಗೆ ಏಷ್ಯಾದಲ್ಲಿ ವ್ಯಾಪಕವಾಗಿ ಬೆಳೆಯಲ್ಪಟ್ಟಿದೆ, ಉದಾಹರಣೆಗೆ ಬಾಂಗ್ಲಾದೇಶ, ಥೈಲ್ಯಾಂಡ್ ಮತ್ತು ಮ್ಯಾನ್ಮಾರ್, ಆಫ್ರಿಕಾ, ಆಸ್ಟ್ರೇಲಿಯಾ, ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಕೆಲವು ದೇಶಗಳಿಗೆ ಹೆಚ್ಚುವರಿಯಾಗಿ ಹುಣಸೆಹಣ್ಣಿನ ಹಣ್ಣುಗಳನ್ನು ಅವುಗಳ ಆಕಾರದಿಂದ ಗುರುತಿಸಲಾಗುತ್ತದೆ, ಅವು ಉದ್ದವಾದ ಕಂದು ಬಾಗಿದ ಬೀಜಕೋಶಗಳಾಗಿವೆ, ಅವುಗಳು 3-12 ಸಣ್ಣ ಬೀಜಗಳಿಂದ ತುಂಬಿರುತ್ತವೆ, ಇವುಗಳಲ್ಲಿ ಹುಣಸೆಹಣ್ಣಿನ ಸಿರಪ್ ಪಾನೀಯ ತಯಾರಿಸಲಾಗುತ್ತದೆ, ಇದು ರಂಜಾನ್ ಪಾನೀಯಗಳ ಪಟ್ಟಿಯಲ್ಲಿ ಇದೂ ಒಂದು ಪ್ರಯೋಜನಗಳನ್ನು ಬೆಂಬಲಿಸುತ್ತದೆ, ಈ ಕೆಳಗಿನವುಗಳನ್ನು ಒಳಗೊಂಡಂತೆ: ಅನೇಕ ಪೋಷಕಾಂಶಗಳು ವಿಟಮಿನ್ ಬಿ 1, ವಿಟಮಿನ್ ಬಿ 2 ಮತ್ತು ವಿಟಮಿನ್ ಬಿ 3 ನಂತಹ ಪ್ರಮುಖ ಜೀವಸತ್ವಗಳು, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳು. ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ ಏಕೆಂದರೆ ಆಕ್ಸಿಡೀಕರಣ ಪ್ರಕ್ರಿಯೆಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ ರಕ್ತದಲ್ಲಿನ ಹಾನಿಕಾರಕ ಕೊಲೆಸ್ಟ್ರಾಲ್. ಇದು ಮೆಗ್ನೀಸಿಯಮ್ನ ಉತ್ತಮ ಮೂಲವಾಗಿದೆ. ರಕ್ತದೊತ್ತಡವನ್ನು ಕಡಿಮೆ ಮಾಡುವುದರಿಂದ, ಇದು ಉರಿಯೂತದ ಮತ್ತು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಕ್ಯಾರಬ್ ಮರಗಳನ್ನು ಮೊದಲು ನೆಟ್ಟದ್ದು ಪ್ರಾಚೀನ ಗ್ರೀಕರು, ಆದರೆ ಅವು ಇತ್ತೀಚೆಗೆ ಪ್ರಪಂಚದಾದ್ಯಂತ ಬೆಳೆದವು. ಈ ಮರಗಳ ಹಣ್ಣುಗಳು ಬಟಾಣಿಗಳಂತೆ - ಬೀಜಕೋಶಗಳಂತೆ ಕಂದು ಬಣ್ಣದಿಂದ ಬೆಳೆಯುತ್ತವೆ ಮತ್ತು ಅವುಗಳೊಳಗೆ ತಿರುಳು ಮತ್ತು ಬೀಜಗಳು ಇದ್ದವು .ಈ ಬೀಜಕೋಶಗಳನ್ನು ತಾಜಾವಾಗಿ ತಿನ್ನಬಹುದು ಅಥವಾ ಪುಡಿ ಮಾಡಿ ಸಿರಪ್ ತಾಯಾರಿಸಲು ಒಣಗಿಸಿ ಅದರ ಪ್ರಯೋಜನ ಪಡೆಯಬಹುದು ಏಕಾಗ್ರತೆ ಅಥವಾ ಸಾರ, ಕ್ಯಾರೋಬ್ ಅನ್ನು ಅನೇಕ ಪಾಕವಿಧಾನಗಳಲ್ಲಿ ಚಾಕೊಲೇಟ್ಗೆ ಪರ್ಯಾಯವಾಗಿ ಬಳಸಲಾಗುತ್ತದೆ, ಏಕೆಂದರೆ ಅದರ ಕೊಬ್ಬಿನಂಶವು ಕೆಫೀನ್ ಮತ್ತು ಅಂಟು ರಹಿತವಾಗಿರುವುದರ ಜೊತೆಗೆ ಕಡಿಮೆ ಗಾತ್ರದಲ್ಲಿ. ಇರುತ್ತದೆ, ಸಾಮಾನ್ಯವಾಗಿ ರಂಜಾನ್ ಪಾನೀಯಗಳ ಪ್ರಯೋಜನಗಳು. ಮತ್ತು ಅದರ ಪ್ರಯೋಜನಗಳನ್ನು ನಿರ್ದಿಷ್ಟವಾಗಿ ಬಳಸಿ ಪ್ರಯೋಜನ ಪಡೆಯಬಹುದು. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಅದರ ಅಂಶದಿಂದಾಗಿ ಇದು ಆಹಾರದ ನಾರಿನಂತೆಯೇ ಕಾರ್ಯನಿರ್ವಹಿಸುವ ಪಾಲಿಫಿನಾಲ್‌ಗಳನ್ನುಹೊಂದಿರುತ್ತದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ದೇಹವನ್ನು ಸ್ವತಂತ್ರ ರಾಡಿಕಲ್ ಮತ್ತು ಕೆಲವು ಬಾಹ್ಯ ಪರಿಸರ ಅಂಶಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಮತ್ತು ಇದು ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅನ್ನು ದೇಹಕ್ಕೆ ಒದಗಿಸಿಕೊಡುತ್ತದೆ . ಅದು ಆರೋಗ್ಯಕರ ಮತ್ತು ಬಲವಾದ ಮೂಳೆಗಳನ್ನು ಕಾಪಾಡಿಕೊಳ್ಳುವುದರಲ್ಲಿ ಉತ್ತಮ ವಾಗಿ ವರ್ತಿಸುತ್ತದೆ. ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವಿಕೆ ಇದು ತ್ವರಿತ ಹೃದಯ ಬಡಿತವನ್ನು ಕಾಪಾಡಿಕೊಳ್ಳುತ್ತದೆ. ಇದು ಥೈರಾಯ್ಡ್ ಕಾರ್ಯವನ್ನು ಸುಧಾರಿಸಲು ಅಗತ್ಯವಾದ ಸೆಲೆನಿಯಂನ ಉತ್ತಮ ಮೂಲವಾಗಿದೆ, ಜೊತೆಗೆ ಆಕ್ಸಿಡೇಟಿವ್ ಹಾನಿ ಅಥವಾ ಸೋಂಕಿನ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಡಿಎನ್‌ಎಯನ್ನು ದೇಹದಲ್ಲಿ ಅತೀ ಬೇಗನೆ ಉತ್ಪಾದಿಸುತ್ತದೆ. ಲೈಕೋರೈಸ್ ಮೂಲ ಯುರೋಪ್ ಮತ್ತು ಏಷ್ಯಾದಲ್ಲಿ ಹುಟ್ಟುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಪಾನೀಯಗಳಿಗೆ ಸಿಹಿಕಾರಕವಾಗಿ ಬಳಸಲಾಗುತ್ತದೆ ಮತ್ತು ಸಿಹಿತಿಂಡಿಗಳು, ಅದರ ಪ್ರಯೋಜನಗಳಿಗಾಗಿ ಪ್ರಾಚೀನವಾಗಿ ಬಳಸಲಾಗುತ್ತಿತ್ತು !!! ಚಿಕಿತ್ಸಕ - ಸಂಶೋಧನೆಯು ಅವುಗಳಲ್ಲಿ ಹಲವು ಪರಿಣಾಮಕಾರಿತ್ವವನ್ನು ಸಾಬೀತುಪಡಿಸದಿದ್ದರೂ . ಇದು ಆಹಾರ ಪೂರಕವಾಗಿ, ಸಾರವಾಗಿ, ಅಥವಾ ಪುಡಿಯಾಗಿ ಅಥವಾ ಒಣಗಿದ ನಂತರ ಅದರ ನೆಲದ ಎಲೆಗಳಿಂದ ತಯಾರಿಸಿದ ಚಹಾದಂತೆ ಅನೇಕ ರೂಪಗಳಲ್ಲಿ ಲಭ್ಯವಿದೆ ಎಂದು ತಿಳಿದುಬಂದಿದೆ. ಮತ್ತು ರಂಜಾನ್ ಪಾನೀಯಗಳ ಪ್ರಯೋಜನಗಳು ಅವುಗಳ ಪ್ರಮುಖ ಪ್ರಭೇದಗಳನ್ನು ಪಡೆಯುವಲ್ಲಿ ಅಡಗಿದೆ, ಇದು ಲೈಕೋರೈಸ್ ಸಿರಪ್ ಇದರ ಪ್ರಯೋಜನಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ: ಗ್ಲೈಸಿರೈಜಿಕ್ ಆಮ್ಲದ ಅಂಶದಿಂದಾಗಿ ಅದರ ಉರಿಯೂತದ ಗುಣಲಕ್ಷಣಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯದಿಂದಾಗಿ ಎದೆಯುರಿ ಅಥವಾ ಹುಣ್ಣುಗಳಿಗೆ ಒಡ್ಡಿಕೊಂಡಾಗ ಇದು ಹೊಟ್ಟೆಯನ್ನು ಶಾಂತಗೊಳಿಸುತ್ತದೆ. ಇದು ಉಸಿರಾಟದ ವ್ಯವಸ್ಥೆಯನ್ನು ಸ್ವಚ್ಛ ಗೊಳಿಸುತ್ತದೆ. ಮತ್ತು ಆರೋಗ್ಯಕರ ಲೋಳೆಯ ಮತ್ತು ಕಫವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಮಟ್ಟವನ್ನು ಉತ್ಪಾದಿಸಲು ಮೂತ್ರಜನಕಾಂಗದ ಗ್ರಂಥಿಯನ್ನು ಉತ್ತೇಜಿಸುತ್ತದೆ ಕಾರ್ಟಿಸೋಲ್, ಇದರಿಂದಾಗಿ ಒತ್ತಡದ ಭಾವನೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಕೆಲವು ಚೀನೀಯರು ತಮ್ಮ ಲ್ಯಾಬ್ ಗಳಲ್ಲಿ ಇತರ ಪದಾರ್ಥಗಳೊಂದಿಗೆಕೆಲವು ರೀತಿಯ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಆದರೆ ಇದು ಚರ್ಮ ಮತ್ತು ಹಲ್ಲಿನ ಆರೋಗ್ಯವನ್ನು ಅದರ ಗುಣಲಕ್ಷಣಗಳಿಂದ ರಕ್ಷಿಸುತ್ತದೆ...

MUSTHAFA HASAN ALQADRI OFFICIAL

Tuesday, January 16, 2024

SYS ಸಮ್ಮೇಳನ ವಿಜಯಗೊಳಿಸಿ.



ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ.........

ಕಳೆದ 30 ವರ್ಷಗಳಿಂದ ಕರುನಾಡ ಮಣ್ಣಿನಲ್ಲಿ ಅತ್ಯಂತ ಶಿಸ್ತು ಬದ್ಧ ಸಂಘಟನೆಯಾಗಿ ಉಲಮಾ ಉಮರಾ ಸಮೂಹವನ್ನು ಒಗ್ಗೂಡಿಸಿ ಇಸ್ಲಾಮಿನ ನೈಜ ತತ್ವಾದರ್ಶಗಳನ್ನು ಸಂರಕ್ಷಣೆ ಮಾಡುತ್ತಾ ಕಾರ್ಯಾಚರಿಸುವ ಮಾದರೀ ಸಂಘಟನೆಯಾಗಿದೆ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ರಿ).

ಶಿಕ್ಷಣ,ಸಾಂತ್ವನ,ಸಾಂಸ್ಕೃತಿಕ,ಸಾಮಾಜಿಕ,ಧಾರ್ಮಿಕ ಮುಂತಾದ ವಲಯಗಳಲ್ಲಿ ಶ್ಲಾಘನೀಯ ಸೇವೆಗಳನ್ನು ಮಾಡುತ್ತಾ ಜನಶ್ರದ್ಧೆಯನ್ನು ಪಡೆದು ಇದೀಗ ಮೂವತ್ತರ ಸಂಬ್ರಮದಲ್ಲಿದೆ SYS.

ಕಳೆದ ಒಂದು ವರ್ಷವನ್ನು ಮೂವತ್ತನೇ ವಾರ್ಷಿಕ ವರ್ಷವೆಂದು ಘೋಷಿಸಿ ವಿವಿಧ ಗಮನಾರ್ಹ ಕಾರ್ಯಕ್ರಮಗಳ ಮೂಲಕ ಆಚರಿಸಿ ಇದೀಗ ಜನವರಿ 24 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಾರೋಪ ಮಹಾ ಸಮ್ಮೇಳನ ನಡೆಯಲಿದೆ.

ಕಳೆದ ಹಲವು ದಿನಗಳಿಂದ ಇದರ ರಾಜ್ಯಾಧ್ಯಕ್ಷ ಬಹು ಹಫೀಳ್ ಸಅದಿ, ಪ್ರಧಾನ ಕಾರ್ಯದರ್ಶಿ ಸಾದಿಖ್ ಮಾಸ್ಟರ್ ಮಲಬೆಟ್ಟು, ಕೊಶಾಧಿಕಾರಿ ಅಡ್ವೊಕೇಟ್ ಹಂಝತ್  ಹಾಗೂ ಸ್ವಾಗತ ಸಮಿತಿ ಚೇರ್ಮನ್ ಮುಂತಾಝಲಿ ಹಾಜಿ ಕನ್ವೀನರ್ ಶಕೀರ್ ಹಾಜಿ ಟ್ರಶರರ್ ಶಾಫಿ ಸಅದಿ ಮುಂತಾದವರ ನಾಯಕತ್ವದಲ್ಲಿ ಭರ್ಜರಿ ಸಿದ್ದತೆಗಳು ಬರದಿಂದ ನಡೆಯುತ್ತಿದೆ.

ಜಾಗತಿಕ ವಿದ್ವಾಂಸ ಇಂಡಿಯನ್ ಗ್ರಾಂಡ್ ಮುಫ್ತಿ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನಾಯಕತ್ವದಲ್ಲಿ ನಡೆಯುವ ಪ್ರಸ್ತುತ ಐತಿಹಾಸಿಕ ಸಮ್ಮೇಳನದಲ್ಲಿ ಲಕ್ಷಾಂತರ ಜನ ಬಾಗವಹಿಸುವ ನಿರೀಕ್ಷೆಯಿದೆ.

ಎಲ್ಲಾ ಸಹೋದರರು ಪ್ರಸ್ತುತ ಸಮ್ಮೇಳನದಲ್ಲಿ ಬಾಗವಹಿಸಿ ಸಂಪೂರ್ಣ ಯಶಸ್ವಿಗೊಳಿಸಿ ದನ್ಯರಾಗಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಬಹು ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಕರೆ ನೀಡಿರುತ್ತಾರೆ.

ವರದಿ: ಅಬ್ದುಸ್ಸಲಾಮ್ ಮದನಿ ಗುಂಡುಕಲ್ಲು...

Tuesday, January 2, 2024

ನಂಜುಕಾರರಿಂದ ತಲೆಕೆಡಿಸಬೇಕಾಗಿಲ್ಲ

 

 ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ (ಅಧ್ಯಕ್ಷರು, ಸಖಾಫಿ ಕೌನ್ಸಿಲ್, ಕರ್ನಾಟಕ ರಾಜ್ಯ)


 ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ದಿನಗಳಲ್ಲಿ ಕೇಳಿ ಬರುತ್ತಿದ್ದ ಕೆಲವೊಂದು ವಾಯ್ಸ್ ಗಳ ಬಗ್ಗೆ ಕೆಲವು ಸ್ನೇಹಿತರು ಬೇಸರ ಹಂಚಿಕೊಂಡಿದ್ದರು. ಅದೇನೆಂದರೆ ಇಲ್ಲಿ ಉದ್ಭವಿಸುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಮುಖ್ಯ ಕಾರಣ ಮುಸ್ಲಿಂ ವಿದ್ವಾಂಸರು ಹಾಗೂ ಅವರ ದಿವ್ಯ ಮೌನ ಎಂದಾಗಿತ್ತು ಆ ವಾಯ್ಸ್ ಗಳ ಒಟ್ಟು ಸಾರಾಂಶ. ಈ ವಾಯ್ಸ್ ಗಳ ಬಗ್ಗೆ ಯಾರೂ ತಲೆಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ.ಯಾಕೆ!? ಮೊದಲನೆಯದಾಗಿ ಈ ಆಕ್ಷೇಪಗಳು ಇಡೀ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಶಬ್ದಗಳಲ್ಲ. ಪುರಾತನ ಕಾಲದಿಂದಲೂ ವಿದ್ವಾಂಸರಲ್ಲಿ ಸದಾ ನಂಜು ಕಾರುವ ಬೆರಳೆಣಿಕೆಯ ಒಂದು ಸಣ್ಣ ಗುಂಪು ನಡೆಸುವ ಕಸರತ್ತುಗಳು ಮಾತ್ರವಾಗಿವೆ ಇದು.

ಇವರಿಗೆ ಸಮಾಜದಲ್ಲಿ ಏನಾದರೊಂದು ಸಮಸ್ಯೆ ಉದ್ಭವಿಸಿದರೆ ಅಥವಾ ಎಲ್ಲೋ ಯಾರೋ ಒಬ್ಬ ಬಿಳಿ ವಸ್ತ್ರದಾರಿಯಿಂದ ಏನಾದರೊಂದು ತಪ್ಪು ಸಂಭವಿಸಿದರೆ ಸಾಕು ಮತ್ತೆ ಇವರಿಗೆ ಹಬ್ಬದ ವಾತಾವರಣ. ಉಲಮಾಗಳ ಹಸಿ ಮಾಂಸವೇ ಇವರ ಆಹಾರ. ಇವರ ಮಾತಿನ ದಾಟಿ ನೋಡಿದರೆ, ಇವರು ಇಡೀ ಮುಸ್ಲಿಂ ಸಮುದಾಯವನ್ನು ದತ್ತು ಪಡೆದವರಂತೆ ತೋರಬಹುದು. *ಲಕ್ಷಾಂತರ ಮೀನುಗಳಿರುವ ಒಂದು ಕೆರೆಯಲ್ಲಿ ಸತ್ತುಹೋದ ಅಲ್ಪಸ್ವಲ್ಪ ಮೀನುಗಳು ನೀರಿನ ಮೇಲೆ ತೇಲಾಡುವುದನ್ನು ನೋಡುಗರು ಈ ಕೆರೆಯ ಮೀನುಗಳೆಲ್ಲ ಸತ್ತು ಹೋಗಿದೆ ಎಂದು ಭಾವಿಸುವಂತಿದೆ.*

ವಾಸ್ತವದಲ್ಲಿ ಆ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಜೀವಂತವಾಗಿ ಅದರ ಪಾಡಿಗೆ ಸಂತೋಷದಿಂದ ವಾಸಿಸುತ್ತಿದೆ. 

ಅದೇ ರೀತಿ ಇವರ ಈ ಕೋಲಾಹಲಗಳ ನಡುವೆಯೇ ಮುಸ್ಲಿಂ ಉಮ್ಮತ್ ಉಲಮಾಗಳ ನಾಯಕತ್ವದಲ್ಲಿ ಶಾಂತವಾಗಿ ಹಾಗೂ ಅತ್ಯಂತ ಪ್ರಬುದ್ಧತಯಿಂದ ಜೀವನ ಮಾಡುತ್ತಿದೆ. ಇವರು ಈ ಮೊಸಳೆ ಕಣ್ಣೀರಿಗೆ ಮಾತ್ರ ಸೀಮಿತರೇ ಹೊರತು ಸಮುದಾಯಕ್ಕೆ ಬೇಕಾಗಿ ಏನೂ ಮಾಡಿದವರೋ ಮಾಡುವವರೋ ಅಲ್ಲವೇ ಅಲ್ಲ.

ಇಲ್ಲಿ ಉಲಮಾಗಳು ಯಾರೆಂದು ಹಾಗೂ ಅವರು ಏನು ಮಾಡಿದ್ದಾರೆ ಹಾಗೂ ಏನು ಮಾಡುತ್ತಾರೆ ಎಂದು ಸಮುದಾಯಕ್ಕೆ ಚನ್ನಾಗಿ ಗೊತ್ತಿದೆ.

ಉಲಮಾಗಳು ಮತ್ತು ಸಮುದಾಯದ ಮಧ್ಯೆ ಇರುವ ಸಂಬಂಧ ಅಷ್ಟೊಂದು ಅಭೇದ್ಯವಾದದ್ದಾಗಿದೆ. ಉಲಮಾಗಳನ್ನು ಸೃಷ್ಟಿ ಮಾಡಿದ್ದೇ ಈ ಸಮುದಾಯವಾಗಿದೆ. ಬಹಳ ಪುರಾತನ ಕಾಲದಿಂದ ಪಳ್ಳಿ ದರ್ಸುಗಳಲ್ಲಿ ಧಾರ್ಮಿಕ ವಿದ್ಯೆ ಕಲಿಯುತ್ತಿದ್ದ ಮುತಅಲ್ಲಿಮರನ್ನು ತಮ್ಮ ಸ್ವಂತ ಮಕ್ಕಳಂತೆ ಅತ್ಯಂತ ವಾತ್ಸಲ್ಯದಿಂದ ನೋಡಿ ಕೊಂಡು ಅವರಿಗೆ ಬೇಕಾದ ಅನ್ನ ಪಾನೀಯ ವಸ್ತ್ರಗಳನ್ನು ನೀಡಿ ವಿದ್ವಾಂಸರನ್ನು ಬೆಳೆಸಿದವರು ಈ ಸಮುದಾಯದ ದೀನೀ ಸ್ನೇಹಿಗಳಾದ ಮಹಿಳೆಯರು ಮತ್ತು ಹಿರಿಯರಾಗಿರುತ್ತಾರೆ.

ಅಂದು ಕೂಡಾ ಈ ನಂಜುಕಾರ ಗುಂಪು ನಂಜುಕಾರುವುದರಲ್ಲೇ ಮಗ್ನವಾಗಿತ್ತು.

ವಿದ್ವಾಂಸರು ಕೂಡಾ ಸಮುದಾಯ ತಮಗೆ ನೀಡಿದ ಈ ಸೇವೆಯನ್ನು ಮನಗಂಡು ಸಮುದಾಯದ ಅಭಿವೃದ್ಧಿಗೆ ಬೇಕಾಗಿ ಸದಾ ಸೇವಾ ಮಗ್ನರಾದವರು ಆಗಿರುತ್ತಾರೆ.*

ತಮ್ಮ ಅನೇಕ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ಹಣ ಸಂಪಾದನೆಯ ವಿವಿಧ ವಲಯಗಳು ತೆರೆದಿಡಲ್ಪಟ್ಟಿದ್ದರೂ ಅದ್ಯಾವುದಕ್ಕೂ ಹೋಗದೆ ಈ ಸಮುದಾಯದ ಶಿಕ್ಷಣ ಮತ್ತು ಸಾಮಾಜಿಕ ರಂಗದಲ್ಲಿ ಅಗಾಧ ಪ್ರಮಾಣದ ಸೇವೆಯಲ್ಲಿ ಮುಂದುವರಿಯುತ್ತಿರುವವರಾಗಿರುತ್ತಾರೆ. ಅಲ್ಲದೆ ಇಸ್ಲಾಮಿನ ಆಶಯ ಆದರ್ಶಗಳಿಗೆ ಬಾಹ್ಯ ಹಾಗೂ ಆಂತರಿಕ ಶತ್ರುಗಳಿಂದ ಸವಾಲುಗಳು ಎದುರಾದಾಗಲೆಲ್ಲಾ ಅದರ ವಿರುದ್ಧ ಇಸ್ಲಾಮಿನ ನೈಜ ಆದರ್ಶದ ಕಾವಲು ಬಟರಾಗಿ ನೆಲೆನಿಂತವರಾಗಿರುತ್ತಾರೆ. ಪ್ರವಾದಿಗಳ ನಂತರ ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಉಲಮಾಗಳು ನಿರ್ವಹಿಸಿರುವುದರಿಂದಲೇ ಪವಿತ್ರ ಇಸ್ಲಾಂ ಈ ಸುದೀರ್ಘ ಇತಿಹಾಸದಲ್ಲಿ ಒಂದು ಅಣುವಿನಷ್ಟೂ ಬದಲಾವಣೆಗೆ ಒಳಗಾಗದೆ ತಲೆಎತ್ತಿ ನಿಂತಿರುವುದು. ಅನೇಕ ಸಂಘಟನೆಗಳ ಮೂಲಕ ಧಾರ್ಮಿಕ ಲೌಕಿಕ ವಿದ್ಯಾಬ್ಯಾಸ ರಂಗದಲ್ಲಿ ಅಸಾಮಾನ್ಯ ಕ್ರಾಂತಿಯನ್ನೇ ಮಾಡಿರುತ್ತಾರೆ.! ಸರಕಾರಗಳನ್ನು ನಾಚಿಸುವ ರೀತಿಯಲ್ಲಿ ವಿದ್ಯಾಬ್ಯಾಸ ಪಠ್ಯ ಜಾರಿಗೊಳಿಸಿ ಏಕೀಕೃತ ಪರೀಕ್ಷಾ ಪದ್ಧತಿಯನ್ನೂ ಕೈಗೊಂಡಿರುತ್ತಾರೆ. ಮಾತ್ರವಲ್ಲ ರಾತ್ರಿ ಹಗಲು ನಿದ್ದೆ ಶ್ರದ್ಧೆ ಎಂಬ ವ್ಯತ್ಯಾಸವಿಲ್ಲದೆ ಸದಾ ಸಮಯ ಸಮುದಾಯದ ಬಗ್ಗೆ ಅತ್ಯಂತ ಕಾಳಜಿಯಿಂದ ಚಿಂತಿಸುವವರೂ ಇದಕ್ಕಾಗಿ ಸದಾ 

ಸಮಯ ಅಲ್ಲಾಹನಲ್ಲಿ ದುಆ ಮಾಡುವವರೂ ಆಗಿರುವರು.

ತಮ್ಮ ಪ್ರತಿಯೊಂದು ದುಆದಲ್ಲಿ ಸಮುದಾಯದ ಇಹಪರ ವಿಜಯಕ್ಕೆ ಬೇಕಾಗಿ ದುಆ ಮಾಡುವವರೂ ಆಗಿರುತ್ತಾರೆ.

ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅತ್ಯಂತ ಸೂಕ್ತ ಹಾಗೂ ಬಲಿಷ್ಠ ಆಯುದ ಅದು ಅಲ್ಲಾಹನಲ್ಲಿ ಮಾಡುವ ದುಆ ಆಗಿರುತ್ತದೆ.

ಹಾಗೂ ಅಲ್ಲಾಹನ ಸಹಾಯವಿಲ್ಲದೆ ಮಾಡುವ ಯಾವ ಸಾಧನೆಯೂ ಶೂನ್ಯ ಎಂದು ಅರಿತವರೂ ಅದರಲ್ಲಿ ದೃಢ ನಂಬಿಕೆ ಹೊಂದಿದವರೂ ಆಗಿರುತ್ತಾರೆ.

ಬಹುಮಾನ್ಯರಾದ ತಾಜುಶ್ಶರೀಅ ಆಲಿಕುಂಞಿ ಉಸ್ತಾದರು ನ.ಮ. ಹೇಳುತ್ತಿದ್ದರು : "ಒಮ್ಮೆ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎಪಿ ಉಸ್ತಾದರೊಂದಿಗೆ ಹಜ್ ಯಾತ್ರೆ ವೇಳೆಯಲ್ಲಿ ಪವಿತ್ರ ಮಿನಾದಲ್ಲಿ ವಾಸಿಸುತ್ತಿದ್ದೆ.ರಾತ್ರಿ ಎಲ್ಲರೂ ಡೇರೆಯೊಳಗೆ ನಿದ್ರಿಸುತ್ತಿದ್ದೆವು. ಮದ್ಯ ರಾತ್ರಿಯಲ್ಲಿ ಉಚ್ಚ ಸ್ವರದಲ್ಲಿ ಯಾರೋ ದುಆ ಮಾಡುವ ಶಬ್ದವನ್ನು ಕೇಳಿಸಿತು. ಎಚ್ಚರವಾಗಿ ಎದ್ದು ನೋಡಿದಾಗ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು ನಿದ್ದೆಯಲ್ಲಿಯೇ ಈ ಉಮ್ಮತ್ತಿಗೆ ಬೇಕಾಗಿ ಸುದೀರ್ಘ ದುಆ ಮಾಡುತ್ತಿದ್ದರು.ನಾನು ಕೂಡಾ ತುಂಬಾ ಹೊತ್ತು ಆ ದುಆಕ್ಕೆ ಆಮೀನ್ ಹೇಳಿದೆನು. ಮರು ದಿವಸ ಉಸ್ತಾದರಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಉಸ್ತಾದರಿಗೆ ಇದರ ಅರಿವೇ ಇರಲಿಲ್ಲ".* ಇದಾಗಿದೆ ನಮ್ಮ ಉಲಮಾಗಳ ಸಮುದಾಯ ಕಾಳಜಿ. ಎಂತಹ ಸಂಕೀರ್ಣ ಸಂದರ್ಭಗಳಲ್ಲಿಯೂ ಹೊಡಿ ಬಡಿ ಸಂಸ್ಕೃತಿಯನ್ನು ಅನುಸರಿಸದೆ ಅತ್ಯಂತ ಪಕ್ವತೆಯಿಂದ ಯೋಗ್ಯವಾದ ತೀರ್ಮಾನಗಳನ್ನು ಯೋಗ್ಯವಾದ ಸಮಯಗಳಲ್ಲಿ ಕೈಗೊಂಡು ಸಮುದಾಯ ದಾರಿ ತಪ್ಪದಂತೆ ಅತಿ ಜಾಗ್ರತೆ ವಹಿಸುವವರಾಗಿರುತ್ತಾರೆ.! ಇದೇ ಆಗಿತ್ತು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಹಿಡಿದು ಪೂರ್ವಿಕ ಇಮಾಮರುಗಳ ಶೈಲಿ. *ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಪ್ರಭೋಧನೆಯ ರಂಗದಲ್ಲಿ ಎದುರಾದ ಎಲ್ಲ ರೀತಿಯ ಸವಾಲುಗಳನ್ನು ಶಾಂತಿ ಮತ್ತು ಸಹನೆಯಿಂದಲೇ ಎದುರಿಸುತ್ತಿದ್ದರು.*    ಸಮುದಾಯದ ಅಸ್ತಿತ್ವದ ವಿಷಯ ಬಂದಾಗ ಮಾತ್ರ ಗತ್ಯಂತರವಿಲ್ಲದೆ ಪ್ರತಿರೋದದ ಮಾರ್ಗವನ್ನು ಅವಲಂಬಿಸಿದ್ದರು. ಆ ಕಾಲದಲ್ಲಿ ನಡೆದ ಬದ್ರ್,ಉಹ್ದ್,ಖಂದಕ್ ಮುಂತಾದ ಅನೇಕ ಯುದ್ದಗಳು ಇದಕ್ಕಿರುವ ದೊಡ್ಡ ಉದಾಹರಣೆಗಳಾಗಿವೆ.

ಆದ್ದರಿಂದ ಉಲಮಾಗಳು ಅಂಬಿಯಾಗಳ ಸರಿಯಾದ ದಾರಿಯಲ್ಲಿಯೇ ಇದ್ದು ಆಧ್ಯಾತ್ಮಿಕ ವಾಗಿ ನೇತೃತ್ವ ನೀಡುವವರು ಆಗಿರುತ್ತಾರೆ. ಇದರ ಮದ್ಯೆ *ಉಲಮಾಗಳ ಸೇವೆಗಳನ್ನು ಕಡೆಗಣಿಸಿ ಸಮುದಾಯ ಉಲಮಾಗಳಿಗೆ ನೀಡುವ ಗೌರವಾದರಗಳಲ್ಲಿ ನಂಜು ಕಾರುವವರಿಂದ ತಲೆಕೆಡಿಸಿ ಕೊಳ್ಳುವ ಅಗತ್ಯ ಇಲ್ಲವೇ ಇಲ್ಲ.

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...